Saturday 13 August 2011

ಗುಬ್ಬಿ ಸಾಲು(೪):














ನಾನು ವಾಸ್ತವದ 
ತುದಿಯನ್ನು ಮುಟ್ಟಿದೆ,
ಆದರೆ ಅದು ಕನಸಿನಲ್ಲಿ...
ಈ ಕನಸೇ,
ಕನಸ ಪರಮಾವಧಿಯಾಯ್ತು
ವಾಸ್ತವದಲ್ಲಿ.....

ಗುಬ್ಬಿ ಸಾಲು(೩):












ಗುಬ್ಬಚ್ಚಿ  ಮಾತೆಲ್ಲ ಗುಟ್ಟಾಯ್ತು....
ಸಮಾಜ ರೆಕ್ಕೆಪುಕ್ಕವ ಕಟ್ಟಾಯ್ತು....

ಗುಬ್ಬಿ ಸಾಲು(೨):














ಸ್ನೇಹದ ವೈಭವೀಕರಣ 
ಮನಸ್ಸಿಗೆ ಮುಳ್ಳಾಯ್ತು.....
ಸಲುಗೆಯ ಸವಿನೆನಪಿನ ಹರಣ 
ಕನಸಿಗೂ ಭಯವಾಯ್ತು...

Monday 8 August 2011

ಗುಬ್ಬಿ ಸಾಲು(೧)














ದುಃಖ ನೂರಾಗಲು 
ನೋವಿಂದು ಮರುಭೂಮಿ...
ಸಂತೈಸುವ ಕವನಗಳ ಕಾಳಜಿಯ 
ಜೊತೆಯೊಂದೇ ಅಭಿರಾಮಿ.... 

ನೀನೊಮ್ಮೆ ನಿನ್ನೇ ಪ್ರೀತಿಸು

















ಮನಸು ಗೋಜಲಾಗಿ,
ಮಂಕು ಕವಿದಾಗ....
ಆಸೆಯ ಸಾವಿನ ಸುದ್ಧಿ 
ಮನವ ಅಪ್ಪಳಿಸಿದಾಗ.....
ಬದುಕಿನ ಅಭಿಲಾಷೆಗಳಿಗೆ 
ಮುಪ್ಪು ಬಂದಾಗ...
ಕಣ್ಣಿನ ಸುತ್ತ ಸೂತಕದ 
ಕಪ್ಪು ಕವಿದಾಗ..
ಎಲ್ಲ ಇರುವಂತೆ ಇದ್ದು 
ಯಾರು ಇರದಾಗ...
ಬಲವಾದ ಉಕ್ಕಿನ ಮನಸು 
ತುಕ್ಕು ಹಿಡಿದಾಗ...
ಜೀವನವು ಸಾಕೆನಿಸಿ ಆತ್ಮವ 
ಕೊಲ್ಲುವ ಮನಸಾದಾಗ...
ನೀನೊಮ್ಮೆ ನಿನ್ನನ್ನೇ 
ಮಗುವಂತೆ ಪ್ರೀತಿಸು ಆಗ...
ನಿನ್ನ ಪ್ರೀತಿಯ ನೀ ಪ್ರೀತಿಸಲು,
ಇನ್ನೇಕೇ ಅನ್ಯ ಅನಾಮಿಕರ ಅನುರಾಗ....

ಇರುಳು


ಕೋಟ ಲೈನು

















ಮಾತಿಗೆ ಸೋತಾಗ,
ಮನಸಿನಲ್ಲಿ ಮಂಕು,
ಬುದ್ದಿಯಲ್ಲಿ ಕೊಂಕು.......

ಪ್ರೀತಿಗೆ ಸೋತಾಗ,
ಹಾರ್ಟ್ ಅಲ್ಲಿ ಲಿಂಕು,
ಕಾಲೇಜಿಗೆ ಬಂಕು......  

ಮರೆಮಾಚಿ


















ಸುಪ್ತ ದುಃಖಗಳು
ಮನದೊಳಗೆ ಅವಿತಿರಲು....   
ಕೆನ್ನೆಗೆ ಕಂಬನಿಯು 
ಸೋಕುತ ಮುತ್ತಿಡಲು.....
ಕಣ್ರೆಪ್ಪೆಯೂ ಕರೆಯಲು 
ಕಂಬನಿಯನ್ನು ಬಳಿಗೆ....
ಕಿವುಡಾಗಿದೆ ಕಂಬನಿಯು 
ಕಣ್ರೆಪ್ಪೆ ಮಾತಿಗೆ....
ನಿಮ್ಮ ಸುಮಧುರ 
ಸಂತೋಷದ ನಗುವಿಗೆ....
ತೋರಿಸದೆ ಮರೆಮಾಚಿ 
ಈ ಕವನ ಮೆಲ್ಲಗೆ..... 

Saturday 6 August 2011

ಅನಂತ
























ನೇಸರನ ಕಿರಣಗಳು 
ದಿಗಂತಕ್ಕೆ ಸ್ವಂತ....
ಕವಿಯ ಮುದ್ದು ಪದಗಳ ಮಾಲೆ  
ಕವನಕ್ಕೆ ಸ್ವಂತ....
ಎದೆಬಿರಿದು ಬರುವ ಕಣ್ಣಂಚಿನ ಹನಿಗಳು
ದುಃಖಕ್ಕೆ ಸ್ವಂತ.....
ಕಣ್ಣುಗಳರಿಯದ, ಕಿವಿಯಾಲಿಸದ ಸುಂದರ  ಭಾವ 
ಸ್ವರ್ಗಕ್ಕೆ ಸ್ವಂತ....
ಯಾರಿಗೂ ಹೇಳದೆ ಬಚಿಟ್ಟ ಮಾತು
ಮೌನಕ್ಕೆ ಸ್ವಂತ...
ಬಯಸಿದರು ನಿಜವಾಗದ ಬಯಕೆಗಳು 
ಕನಸಿಗೆ ಸ್ವಂತ...
ಸಂಬಂಧಗಳ ಸಂಕೋಲೆಗಳು 
ಬದುಕಿಗೆ ಸ್ವಂತ....
ಎಲ್ಲ ಸಂಕೋಲೆಗಳ ಮಧ್ಯೆ ಸೆಣೆಸಿದ ಬಳಿಕ 
ಜೀವನವು ಸಾವಿಗೆ ಸ್ವಂತ....
ಸಾವಿನ ನಂತರದ ಬದುಕು
ಅನಂತಕ್ಕೆ ಸ್ವಂತ.....
ಅನಂತತೆ ಸರ್ವ ಸಂಬಂಧಗಳ ಮೀರಿದ 
ಗೆಳೆತನಕ್ಕೆ ಸ್ವಂತ...
ಅನಂತ ಗೆಳೆತನ 
ಅನನ್ಯ ಗೆಳೆಯರಿಗೆ ಸ್ವಂತ.....

ಸ್ನೇಹ






















ಅಕ್ಷರಗಳ ಸ್ನೇಹ 
     ಪದಕ್ಕೆ ರೂಪಾಂತರ....
ಖಾಲಿ ಜಾಗಗಳು 
  ಮಧ್ಯೆ ನುಸುಳಿರಲು
  ವಾಕ್ಯಗಳು ಸುಂದರ....
ಕೋಪತಾಪಗಳು 
  ಗೆಳೆತನದಲ್ಲಿ ಮಧ್ಯಂತರ...
ಆದರೂ ಸ್ನೇಹ 
   ಅಮರತ್ವದ  ಸಾದರ.....

ನಮನ


















ಮೊದಲ ಮಾತಲ್ಲಿ ಸ್ಪೂರ್ತಿಗೆ ನಮನ,


ಸ್ಪೂರ್ತಿಯ ಕಾರಣವೇ ಈ ಎಲ್ಲ  ಕವನ.....